Sunday, May 30, 2010

ಓಶೋ

ಓಶೋ 21ನೇ ಶತಮಾನ ಕಂಡ ಅತ್ಯದ್ಭುತ ಶಕ್ತಿ ಸಂಚಯಗಳಲ್ಲಿ ಓಶೋ ಒಬ್ಬರು. ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಉಳಿದ ಹಳೆಯ ಪಳೆಯುಳಿಕೆಗಳನ್ನು ಕಳಚಿ ಅದರ ನಿಜ ಸ್ವರೂಪವನ್ನು ಬಯಲಿಗಿಟ್ಟ ಮೊಟ್ಟಮೊದಲ ವ್ಯಕ್ತಿ ಓಶೋ. ಕೇವಲ ಬದುಕನ್ನು ಪ್ರವಚನಗಳಿಗೆ ಮಾತ್ರ ಸೀಮಿತಗೊಳಿಸದೆ ಸತ್ತುಹೋದ ಅಂಧ ಶ್ರದ್ಧೆಗಳಿಗೆ ಜೋತುಬೀಳದೆ ಉಪನಿಷತ್ತಿನ ಬೆಳಕಿನಲ್ಲಿ ಬದುಕು ಕಂಡುಕೊಂಡ ಜಗತ್ತಿಗೆ ಬೆಳಕಿನ ಮಾರ್ಗ ತೋರಿದ ನಿಜವಾದ ಜಗದ್ಗುರು. ತಾನು ಸಾಧನೆ ಮಾಡಿದ ಹಾದಿಯಲ್ಲಿಯೇ ಈವರೆವಿಗೆ ಜಗತ್ತಿನಲ್ಲಿ ಯಾರೂ ನೀಡಲಾರದಷ್ಟು ಅಂದರೆ ಸುಮಾರು 121 ಧ್ಯಾನ ವಿಧಾನಗಳನ್ನು ಜಗತ್ತಿಗೆ ನೀಡಿದ ಏಕೈಕ ವ್ಯಕ್ತಿ ಓಶೋ. ಇವರ ಕುಂಡಲಿನಿ ಯೋಗ, ಡೈನಮಿಕ್, ವಿಪಶನ ಪದ್ಧತಿ ಮುಂತಾದ ಪದ್ಧತಿಗಳನ್ನು ಆಧರಿಸಿ ಹೊಸ ಹೆಸರುಗಳೊಂದಿಗೆ ಬೆಳಕಿಗೆ ಬಂದ ಅದೆಷ್ಟೋ ಹೊಸ ಯೋಗಾಚಾರ್ಯರು ನೇರವಾಗಿ/ಪರೋಕ್ಷವಾಗಿ ಈತನಿಗೆ ಋಣಿಯಾಗಿದ್ದಾರೆ. ಸ್ಥಾಪಿತ ಆಲೋಚನೆಗಳನ್ನು ಹೊರತುಪಡಿಸಿ, ಸ್ವಬುದ್ಧಿಯಿಂದ ಚಿಂತಿಸಲು ತಿಳಿಸಿದ ಮೊಟ್ಟಮೊದಲ ವ್ಯಕ್ತಿ ಓಶೋ. ಮತ್ತೆ ಭೇಟಿಯಾಗುವ.....

No comments:

Post a Comment